ಮಾರ್ಕೊ ಪೋಲೋ
1254-1324 ಇಟಲಿ ಲೋಕವಿಖ್ಯಾತ ಪ್ರವಾಸಿ ಲೇಖಕ ಹುಟ್ಟಿದ್ದು ವೆನಿಸ್‍ನಲ್ಲಿ ಈತ ತನ್ನ ತಂದೆ ಹಾಗೂ ಚಿಕ್ಕಪ್ಪನೊಂದಿಗೆ ಏಷ್ಯಾಖಂಡದ ಪಶ್ಚಿಮದಿಂದ ಹಿಡಿದು ಪೂರ್ವಕ್ಕೆ ಪಿಕಿಂಗ್ ವರದಿ ಪ್ರವಾಸ ಕೈಗೊಂಡ (1271-75) ಈ ಪ್ರವಾಸದ ಚಿತ್ರ-ವಿಚಿತ್ರ ರೋಮಾಂಚಕಾರಿ ಅನುಭವಗಳನ್ನು ವೆನಿಷಿಯನ್ ಭಾಷೆಯ ಪ್ರಪಂಚದ ವಿವರಣೆ ಎಂಬ ಪ್ರವಾಸ ಕಥನದಲ್ಲಿ ಸುಧೀರ್ಘವಾಗಿಯೂ ರಸವತ್ತಾಗಿಯೂ ವರ್ಣಿಸಲಾಗಿದೆ. ಈ ಪ್ರವಾಸ ಪುಸ್ತಕದಲ್ಲಿ 3 ಜನ ಪೌರಸ್ತ್ಯ ಜ್ಞಾನಿಗಳು ಚಂಗೇಸ್ ಖಾನನ ಕಥೆ ಪರ್ವತದ ಮುದುಕ ಪ್ರೆಸ್ಟರ ಜಾನ್ ಒಕ್ಕಣ್ಣು ಮೋಚಿ. ಕುಸ್ತಿ ಮಾಡುವ ರಾಜಕುಮಾರ ಮುಂತಾದ ಅತ್ಯಂತ ಸುಂದರವಾದ ಕಥೆಗಳು ಸೇರಿವೆ. ಇಟಲಿಯ ವಾಯುವ್ಯಕ್ಕಿರುವ ಬಂದರಾದ ಜನೋವದ ಜನರು 1298ರಲ್ಲಿ ಈತನನ್ನು ಬಂಧಿಸಿ ಒಂದು ವರ್ಷ ಸೆರೆಮನೆಯಲ್ಲಿಟ್ಟರು. ಅಲ್ಲಿಯ ತನ್ನ ಜೊತೆಗಾರನಿಗೆ ತನ್ನ ಪ್ರವಾಸ ಕಥನವನ್ನು ಹೇಳಿ ಬರೆಸಿ ಅನಂತರ ದಿ ಬುಕ್ ಆಫ್ ಮಾರ್ಕೋ ಫೋಲೋ ಎಂಬ ಹೆಸರಿನಲ್ಲಿ ಪ್ರಕಟಿಸಿದ. 
(ಎಚ್.ಈ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ